Sunday, March 16, 2008

ಮಳೆಯ ನಡುವೆ ಎರಡು ದಿನ !

ಬೆಂಗಳೂರಿನಲ್ಲಿ ನೆನ್ನೆ- ಇವತ್ತು ಮಳೆಯದ್ದೆ ಮಾತು; ಇದೇನಿದು ಹೊತ್ತಲ್ಲದ ಹೊತ್ತಲ್ಲಿ . ಅದರ ಜೊತೆ ಶನಿವಾರವಿಡಿ ಎಲ್ಲಾಕಡೆ
ಟ್ರಾಫಿಕ್ ಜಾಮ್ನದ್ದೆ ಆರ್ಭಟ ; ಆ ವಿಚಾರಕ್ಕೆ ಎಲ್ಲ ಪಕ್ಷದವರಿಗೂ ಒಂದು ಸಣ್ಣ ಥ್ಯಾಂಕ್ಸ್! ಅದೇನೆ ಇರಲಿ ಈ ಎರಡು ದಿನ ಏನೋ ಒಂದು ತರಹ ಚೆನ್ನಾಗಿತ್ತು , ಮೋಸ್ಟ್ಲಿ ಸದ್ದಿಲದೇ ಸುರಿದ ಮಳೆಯಿಂದ ಊರು ಮತ್ತು ಮನಸುಗಳು ಒಂದು ರೀತಿ ಮಿಂದು ಶುಭ್ರವಾದಂತಿವೆ .
ಹೇಳಬೇಕ್ಕಾಗಿದ್ದು ಅದಲ್ಲ ; ಮಳೆಬಂದಾಗೆಲ್ಲಒಂದು ವಿಷಯ ಗಮನಿಸಿದ್ದೀರಾ? ಮನಸು ಇದ್ದಕಿದ್ದಂತೆ ಭೂತಕಾಲಕ್ಕೆ ಓಡುತ್ತದೆಲಗಾಮಿಲ್ಲದ ಕುದುರೆಯಂತೆ . ಕಳೆದು ಹೋದ ಬಾಲ್ಯ , ಕಳೆದು ಹೋದ ಊರು, ಮರತೇ ಹೋದ ಸಣ್ಣದೊಂದು ವಿಷಯ , ಗೊತ್ತಿಲದಂತೆ ಗುರುತುಕಳೆದುಕೊಂಡ ನಮ್ಮಿಷ್ಟದ ಆಡಿ - ಓದಿ ಬೆಳೆದ ಶಾಲೆ , ಅಕ್ಷರ ಕಲಿಸಿದ ಪ್ರಿಮೆರಿ ಸ್ಕೂಲಿನ ಮೇಷ್ಟ್ರು , ಕಾಲೇಜ್ ಮುಗಿದ ಮೇಲೆ ಒಂದೇ ಒಂದು ಕೆಲಸ ಸಿಕ್ರೆ ಸಾಕು ಅಂತ ಅಲಿತಾ ಇದ್ದ ದಿನಗಳು, ಅದೇ ಊರಲ್ಲಿ ಇದ್ದು ಸಿಗದೆ ಹೋಗೀರುವ ಗೆಳೆಯರು, ಎಲ್ಲಾದರು ಏನಾದ್ರು ಆಗಿ ಚೆನ್ನಾಗಿರೋ ಅಂತ ಹಾರೈಸಿದ ಕಾಲೇಜಿನ ಆ ಗೆಳತಿ , ಎಲ್ಲ ಇದ್ದು ಕಾರಣ ವಿಲ್ಲದೆ ಬಿಟ್ಟು ಹೋದ ಜೀವ , ಎಲ್ಲ ಒಂದೇ ಸರ್ತಿ ಬಂದು ನೆನಪಿನಂಗಳದಿ ತಕದಿಮ ಕುಣಿತ ಪರಸ್ಪರ ಜಿದ್ದಿಗೆ ಬಿದ್ದವರಂತೆ !!
ಕಳೆದು ಹೋದ ದಿನಗಳೇ ಹಾಗಿರಬೇಕು ಅವೊಂದು ತರಹ ಖುಷಿ ಮತ್ತು ನಿಟ್ಟುಸಿರಿನ ಸಮಾಗಮ . ಆ ದಿನಗಳು ಅದ್ಬುತ ಹಾಗು ಸುಖದಾಯಕವಗಿದ್ದವೋ ಅಲ್ಲಿ ಒಂದು ಉಲ್ಲಾಸದ ಅಲೆ ತೇಲಿ ಮನಸ್ಸಿಗೆ ಹಿತ ತರುತ್ತವೆ ,ಮರೆತು ಬಿಡಬೇಕಾದಂತ ದಿನಗಳಾದರೆ ಅಲ್ಲೊಂದು ನಿಟ್ಟುಸಿರು ಮೂಡಿ ಮಾಯವಾಗುತ್ತದೆ . ಅವೆರಡರಲ್ಲಿ ಯಾವುದೇ ಒಂದಿದ್ದರು , ಅಲ್ಲೊಂದು ಗ್ಯಾರಂಟಿ ಇರುತ್ತದೆ ; ಕಳೆದು ಹೋದದ್ದು ಕಷ್ಟವೋ ಸುಖವೋ ಆದರದು ಕಳೆದು ಹೋದದ್ದು , ಅನುಭವಿಸಿದ್ದು ,ಮುಗಿದು ಹೋದದ್ದು -ಹಾಗಾಗಿ ಅಷ್ಟರ ಮಟ್ಟಿನ ನಿಶ್ಚಿಂತೆ ! ವರ್ತಮಾನದಂತೆ ಅನುಭವಿಸುತ್ತಿರುವ ಕಷ್ಟ -ಸುಖದ ಹಾಗಲ್ಲ ಅಥವಾ ಭವಿಷ್ಯದಂತೆ ಗೊತ್ತಿರದ ಗೊತ್ತಿರದ magic box ಅಲ್ಲ .