Saturday, November 29, 2008

ಮತ್ತದೇ ಬೇಸರ .....


ತುಂಬ ದಿನ ಆಗಿದ್ದಿಲ್ಲ ಗೌಹಾಟಿ ಬ್ಲಾಸ್ತ್ಸ್ ಆಗಿ ಅಂದ ಗೆಳೆಯನೊಬ್ಬ . ತುಂಬ ದಿನ ಆದ್ಮೇಲೆ ಆಗಿದ್ರೆ ಪರ್ವಾಗಿಲ್ಲ್ವ!? ಅಂದ ಮತ್ತೊಬ್ಬ ! ಮತ್ತಿನೇನೂ ಮಾತಿಲ್ಲದಂಗೆ ಮುವ್ವರಲ್ಲೂ ಮೌನ.

ಜೀವನದ ಒಂದು ಭಾಗದಂತೆ ಸ್ವೀಕರ್ಸಿ ಬಿಟ್ಟಿದೀವಿ, ಉಗ್ರರನ್ನ , ಬ್ಲಾಸ್ಟ್ಗಳನ್ನ , ಅವರ ಅಟ್ಟಹಾಸವನ್ನ ಹಾಗು ನಮ್ಮೆಲ್ಲ ನಾಯಕರ ಸಿದ್ಧ ಉತ್ತರಗಳನ್ನ ! ಯಾವುದು ಅಸಹಜ ಅಂತ ಅನ್ಸ್ದೆರುಷ್ಟು, ಅನ್ಸಿದ್ರೊನು ಹೋಗ ಅತ್ಲಾಗಿ ಅಂತ ಸುಮ್ನೆ ಇರೋದನ್ನ ಆಭ್ಯಾಸ ಮಾಡ್ಕೊಂಡು ಜೀವನ ಮಾಡ್ತಾ ಇದಿವಿ.
ಸರಿ, ಸರ್ಕಾರ ಜನರ ಎಲ್ಲ ಸಮಸ್ಯೆಗಳನ್ನ ಸರಿ ಮಾಡೋಕೆ ಆಗೋಲ್ಲ , ಆದ್ರೆ ಜನರ ರಕ್ಷಣೆ ನೆ ಸರ್ಕಾರ ಮಾಡದೇ ಇನ್ನೇನು ಜನ ಅವರವರ ಸೆಕ್ಯೂರಿಟಿ ನೋಡ್ಕೊಳೋಕೆ ಸಾದ್ಯ ಆಗುತ್ತಾ? ಇಷ್ಟು ಮಾತ್ರದ ಜವಬ್ದಾರಿ ತಗೊಳೋಕೆ ಸಿದ್ಧ ಇಲ್ಲದ ಸರ್ಕಾರಕ್ಕೆ, ಅದನ್ನ ನಡೆಸ್ತಾ ಇರೋ ಪ್ರತಿಯೊಬ್ಬರಿಗೂ ಧಿಕ್ಕಾರವಿರಲಿ!
ಅದೆಷ್ಟು ವ್ಯವಸ್ಥಿತವಾಗಿ ಊರಿಗೆ ನುಗ್ಗಿ ತಮಗಿಸ್ಷ್ಟ ಬಂದ ಹಾಗೆ , ಪ್ರತಿ ಬಾರಿಯೂ ಹೊಸ ತಂತ್ರದೊಂದಿಗೆ ದಾಳಿ ಮಾಡುತ್ತಲೇ ಇದಾರೆ ; ನಾವು ನೋಡಿ ಮರೆತು ಬಿಡ್ತೀವಿ . ಮರೆತು ಬಿಡ್ತಾರೆ ಅಂತ ಸಮಸ್ತ ಪುಂಡ ಪೋಕರಿಗಳಿಗೂ ಗೊತ್ತು ಹಾಗು ಅದೇ ಧೈರ್ಯದಿಂದಲೇ ಮತ್ತೆ ಮತ್ತೆ ಅಸಂಬದ್ದ ಹೇಳಿಕೆ ಘೋಷಣೆಗಳೊಂದಿಗೆ ಹಲ್ಲು ಗಿಂಜುತಲೇ ಇರುತ್ತಾರೆ .

ಮತ್ತೆ ಮತ್ತೆ ಸಾಮನ್ಯ ಜನ ತಮ್ಡಲ್ಲದ ತಪ್ಪಿಗೆ ತಲೆ ದಂಡ ಕೊಡುತ್ತಲೇ ಇರುತ್ತಾರೆ.

ಪ್ರಶ್ನೆಗಳು ಮತ್ತೆ ಪ್ರಶ್ನೆಗಳಾಗೇ ಉಳಿದು ಹೋಗುತ್ತವೆ, ಉತ್ತರವಿಲ್ಲದೆ.
ಉತ್ತರಕ್ಕೆ ಕಾಯುವ ಕಾಯಕವಲ್ಲದೆ ಮತ್ತಿನೇನು ಮಾಡದ ಹಾಗೆ ನಾಗರಿಕ ಸಮಾಜ ವ್ಯಸ್ತ ವಾಗಿದೆ ತಮ್ಮ ತಮ್ಮ ನಿತ್ಯದ ಸಂಸಾರದ ಕಾಯಕದಲ್ಲಿ!!
ಸಾಮನ್ಯ ಜನ ಇನ್ನೇನು ತಾನೆ ಮಾಡೋಕೆ ಆಗುತ್ತೆ? ದಿನ ಪ್ರತಿ ಬದುಕೇ ಹೋರಾಟ , ಅದರ ಜೊತೆ ರಕ್ಷಣೆಗೆ ತಾನೆe ಹೋರಾಟ ಮಾಡ್ಕೋಬೇಕು ಅಂದ್ರೆ ಹೇಗೆ?
ತನಗೆ ಭದ್ರತೆ ಕೊಡದ ಸರ್ಕರವಾದ್ರು ಯಾಕೆ ಬೇಕು? ಅವರ ಲೆಕ್ಕವಿಲ್ಲದ ಖರ್ಚನ್ನ ಭರಿಸಬೇಕಾದರು ಯಾಕೆ ?
ಮತ್ತೆ ಪ್ರಶ್ನೆಗಳ ಸರಮಾಲೆ, ಉತ್ತರ ಗಳದ್ದೇ ಹುಡುಕಾಟ.
ಮತ್ತದೇ ಬೇಸರ ....... ಅಸಹಾಯಕತೆಯದು!






Sunday, March 16, 2008

ಮಳೆಯ ನಡುವೆ ಎರಡು ದಿನ !

ಬೆಂಗಳೂರಿನಲ್ಲಿ ನೆನ್ನೆ- ಇವತ್ತು ಮಳೆಯದ್ದೆ ಮಾತು; ಇದೇನಿದು ಹೊತ್ತಲ್ಲದ ಹೊತ್ತಲ್ಲಿ . ಅದರ ಜೊತೆ ಶನಿವಾರವಿಡಿ ಎಲ್ಲಾಕಡೆ
ಟ್ರಾಫಿಕ್ ಜಾಮ್ನದ್ದೆ ಆರ್ಭಟ ; ಆ ವಿಚಾರಕ್ಕೆ ಎಲ್ಲ ಪಕ್ಷದವರಿಗೂ ಒಂದು ಸಣ್ಣ ಥ್ಯಾಂಕ್ಸ್! ಅದೇನೆ ಇರಲಿ ಈ ಎರಡು ದಿನ ಏನೋ ಒಂದು ತರಹ ಚೆನ್ನಾಗಿತ್ತು , ಮೋಸ್ಟ್ಲಿ ಸದ್ದಿಲದೇ ಸುರಿದ ಮಳೆಯಿಂದ ಊರು ಮತ್ತು ಮನಸುಗಳು ಒಂದು ರೀತಿ ಮಿಂದು ಶುಭ್ರವಾದಂತಿವೆ .
ಹೇಳಬೇಕ್ಕಾಗಿದ್ದು ಅದಲ್ಲ ; ಮಳೆಬಂದಾಗೆಲ್ಲಒಂದು ವಿಷಯ ಗಮನಿಸಿದ್ದೀರಾ? ಮನಸು ಇದ್ದಕಿದ್ದಂತೆ ಭೂತಕಾಲಕ್ಕೆ ಓಡುತ್ತದೆಲಗಾಮಿಲ್ಲದ ಕುದುರೆಯಂತೆ . ಕಳೆದು ಹೋದ ಬಾಲ್ಯ , ಕಳೆದು ಹೋದ ಊರು, ಮರತೇ ಹೋದ ಸಣ್ಣದೊಂದು ವಿಷಯ , ಗೊತ್ತಿಲದಂತೆ ಗುರುತುಕಳೆದುಕೊಂಡ ನಮ್ಮಿಷ್ಟದ ಆಡಿ - ಓದಿ ಬೆಳೆದ ಶಾಲೆ , ಅಕ್ಷರ ಕಲಿಸಿದ ಪ್ರಿಮೆರಿ ಸ್ಕೂಲಿನ ಮೇಷ್ಟ್ರು , ಕಾಲೇಜ್ ಮುಗಿದ ಮೇಲೆ ಒಂದೇ ಒಂದು ಕೆಲಸ ಸಿಕ್ರೆ ಸಾಕು ಅಂತ ಅಲಿತಾ ಇದ್ದ ದಿನಗಳು, ಅದೇ ಊರಲ್ಲಿ ಇದ್ದು ಸಿಗದೆ ಹೋಗೀರುವ ಗೆಳೆಯರು, ಎಲ್ಲಾದರು ಏನಾದ್ರು ಆಗಿ ಚೆನ್ನಾಗಿರೋ ಅಂತ ಹಾರೈಸಿದ ಕಾಲೇಜಿನ ಆ ಗೆಳತಿ , ಎಲ್ಲ ಇದ್ದು ಕಾರಣ ವಿಲ್ಲದೆ ಬಿಟ್ಟು ಹೋದ ಜೀವ , ಎಲ್ಲ ಒಂದೇ ಸರ್ತಿ ಬಂದು ನೆನಪಿನಂಗಳದಿ ತಕದಿಮ ಕುಣಿತ ಪರಸ್ಪರ ಜಿದ್ದಿಗೆ ಬಿದ್ದವರಂತೆ !!
ಕಳೆದು ಹೋದ ದಿನಗಳೇ ಹಾಗಿರಬೇಕು ಅವೊಂದು ತರಹ ಖುಷಿ ಮತ್ತು ನಿಟ್ಟುಸಿರಿನ ಸಮಾಗಮ . ಆ ದಿನಗಳು ಅದ್ಬುತ ಹಾಗು ಸುಖದಾಯಕವಗಿದ್ದವೋ ಅಲ್ಲಿ ಒಂದು ಉಲ್ಲಾಸದ ಅಲೆ ತೇಲಿ ಮನಸ್ಸಿಗೆ ಹಿತ ತರುತ್ತವೆ ,ಮರೆತು ಬಿಡಬೇಕಾದಂತ ದಿನಗಳಾದರೆ ಅಲ್ಲೊಂದು ನಿಟ್ಟುಸಿರು ಮೂಡಿ ಮಾಯವಾಗುತ್ತದೆ . ಅವೆರಡರಲ್ಲಿ ಯಾವುದೇ ಒಂದಿದ್ದರು , ಅಲ್ಲೊಂದು ಗ್ಯಾರಂಟಿ ಇರುತ್ತದೆ ; ಕಳೆದು ಹೋದದ್ದು ಕಷ್ಟವೋ ಸುಖವೋ ಆದರದು ಕಳೆದು ಹೋದದ್ದು , ಅನುಭವಿಸಿದ್ದು ,ಮುಗಿದು ಹೋದದ್ದು -ಹಾಗಾಗಿ ಅಷ್ಟರ ಮಟ್ಟಿನ ನಿಶ್ಚಿಂತೆ ! ವರ್ತಮಾನದಂತೆ ಅನುಭವಿಸುತ್ತಿರುವ ಕಷ್ಟ -ಸುಖದ ಹಾಗಲ್ಲ ಅಥವಾ ಭವಿಷ್ಯದಂತೆ ಗೊತ್ತಿರದ ಗೊತ್ತಿರದ magic box ಅಲ್ಲ .